I am not afraid -Kannadaನಾನು ದೊಡ್ಡ ಹುಡುಗಿ. ನಾನು ಮನೆಯ ಹೊರಗೆ ಒಬ್ಬಳೇ ಹೋಗುತ್ತೇನೆ.ಅಬ್ಬಾ! ಎಷ್ಟು ಕತ್ತಲೆ! ಯಾರಾದರೂ ಇದ್ದೀರಾ ಅಲ್ಲಿ? ಯಾರದು?ಓ! ಅದು ಒಂದು ಬೆಕ್ಕು. ನನಗೇನೂ ಭಯವಿಲ್ಲ.ಹೊರಗೆ ಕಪ್ಪಗಿನ ಒಂದು ದೊಡ್ಡ ವಸ್ತು ಕಾಣಿಸುತ್ತಿದೆ. ಏನದು?ಓ! ಅದು ಬಾವಿ. ನನಗೇನು ಭಯವಿಲ್ಲ.ಮತ್ತೆ ಆ ಶಬ್ದ! ಕಿರ್, ಕಿರ್, ಕಿರ್, ಏನದು?ಅಕ್ಕ ಬಾವಿಯಿಂದ ನೀರು ಸೇದುತ್ತಿದ್ದಾಳೆ ಅಷ್ಟೆ! ನನಗೇನೂ ಭಯವಿಲ್ಲ.ಹೆಜ್ಜೆ ಸದ್ದು ಕೇಳಿಸುತ್ತಿದೆ! ಯಾರದು? ಯಾರದು?ಅದು ನನ್ನ ತಾಯಿ. ಅವಳು ಹೊಲದ ಕೆಲಸ ಮುಗಿಸಿ ಮನೆಗೆ ಬಂದಿದ್ದಾಳೆ.ನಾನೀಗ ದೊಡ್ಡ ಹುಡುಗಿ.ನನಗೆ ಯಾವ ಭಯವೂ ಇಲ್ಲ.
Click to Read an Interactive version of this story here